ಕ್ಯಾರಿನೇಟಿ	

ಪಕ್ಷಿವರ್ಗವನ್ನು ಹಾರಾಡುವ ಹಕ್ಕಿಗಳು ಮತ್ತು ಹಾರಲಾರದ ಹಕ್ಕಿಗಳೆಂದು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಹಾರಾಡುವ ಹಕ್ಕಿಗಳ ಗುಂಪೇ ಕ್ಯಾರಿನೇಟಿ. ಇನ್ನೊಂದರ ಹೆಸರು ರ್ಯಾಟೈಟಿ. ಆದರೆ ಇತ್ತೀಚೆಗೆ ಪಕ್ಷಿವರ್ಗವನ್ನು ಅನೇಕ ಉಪವರ್ಗಗಳಾಗಿ ವಿಂಗಡಿಸಲಾಗಿರುವುದರಿಂದ ಮೇಲೆ ಹೇಳಿದ ವರ್ಗೀಕರಣವನ್ನು ಕೈಬಿಡಲಾಗಿದೆ. ಕ್ಯಾರಿನೇಟ ಗುಂಪಿನ ಹಕ್ಕಿಗಳಲ್ಲಿರುವ ಎದೆ ಮೂಳೆಯ ತಳಭಾಗ ಚಾಚಿಕೊಂಡು ದೋಣಿಯಾಕಾರವನ್ನು ತಳೆದಿದೆ. ಇದಕ್ಕೆ ಕೀಲ್ ಎಂದು ಹೆಸರು. ಇದರ ಇಕ್ಕಡೆಗಳಲ್ಲಿ ಹಾರುವುದಕ್ಕೆ ಸಂಬಂಧಿಸಿದ ಸ್ನಾಯುಗಳು ಅಂಟಿಕೊಂಡಿದ್ದು ಹಕ್ಕಿ ಹಾರಲು ಸಹಕಾರಿಯಾಗಿದೆ.														(ಜಿ.ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ